ಭಾರತ ಹವಾಮಾನ ಇಲಾಖೆ ಹಾಗೂ ಕೃಷಿ ಮಂತ್ರಾಲಯ ಇವರು ರೈತರಿಗೆ ಉಚಿತವಾಗಿ ಹವಾಮಾನ ಆಧಾರಿತ ಲಘು ಸಲಹೆಗಳನ್ನು/ಸಂದೇಶಗಳನ್ನು ಮೊಬೈಲ್ ಮೂಲಕ ನೀಡುವ ಯೋಜನೆಯನ್ನು, ಪ್ರಾರಂಭಿಸಿರುತ್ತಾರೆ. ಈ ಸಲಹಾ ಸೇವೆಯನ್ನು ಪಡೆದುಕೊಳ್ಳಲು, ಆಸಕ್ತ ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಬೆಳೆಗಳ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ. ಈ ಕಳಗಿನ ಸೂಚನೆಗಳಂತೆ ನೋಂದಣಿ ನಮೂನೆಯನ್ನು ಭರ್ತಿ ಮಾಡಲು ರೈತರನ್ನು ಕೋರಲಾಗಿದೆ.

1. 7, 8 ಅಥವಾ 9 ಅಂಕಿಯಿಂದ ಪ್ರಾರಂಭವಾಗುವ 10 ಅಂಕಿಯ ಮೊಬೈಲ್ sMFsಸಂಖ್ಯೆಯನ್ನು ನಮೂದಿಸಿ

2. ಕ್ರಿಯಾಪಟ್ಟಿಯನ್ನು ಉಪಯೋಗಿಸಿ ರಾಜ್ಯ, ಜಿಲ್ಲೆ, ಮತ್ತು ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಿ

3. ಕೆಳಗೆ ಇಳಿಯುವ ಕ್ರಿಯಾಪಟ್ಟಿಯನ್ನು ಉಪಯೋಗಿಸಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಿ. ಕನಿಷ್ಟ ಒಂದು ಬೆಳೆಯನ್ನಾದರೂ ಆಯ್ಕೆ ಮಾಡಿಕೊಳ್ಳಿ

4. ಚಿತ್ರದಲ್ಲಿ ಇರುವ ಬರಹವನ್ನು ತುಂಬಿ , ಉಳಿಸಿ ಗುಂಡಿಯನ್ನು ಒತ್ತಿ

5. ಪರದೆಯ ಮೇಲೆ ನೋಂದಣಿ ಸಂಪೂರ್ಣವಾಯಿತೆಂಬ ಸೂಚನೆ ಕಾಣಿಸಿಕೊಳ್ಳುತ್ತದೆ.

6. ನೋಂದಾಯಿಸಿಕೊಳ್ಳಲು ನೋಂದಣಿ ಗುಂಡಿ ಯನ್ನು ಒತ್ತಿರಿ ನೋಂದಣಿ ಗುಂಡಿ